Proposed New Veda Patashala Building, Work in Progressಆತ್ಮೀಯ ಗುರುಬಂಧುಗಳೇ

ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳವರು ಶ್ರೀ ಶ್ರೀಧರಾಶ್ರಮ ಶ್ರೀಕ್ಷೇತ್ರ ವರದಪುರದಲ್ಲಿ ಶ್ರೀ ಶ್ರೀಧರ ಸಾಂಗವೇದ ವಿದ್ಯಾಲಯವನ್ನು ಸ್ಥಾಪಿಸಿದರು. ಶ್ರೀ ಭಗವಾನರು ಈ ವೇದ ವಿದ್ಯಾಲಯದ ವಾರ್ಷಿಕೋತ್ಸವ ದಿನಾಂಕ 04-06-1960ರಂದು ಆಶೀರ್ವಚನ ನೀಡುತ್ತಾ “ಈವಾಗ ವೇದ ಪಾಠಶಾಲೆಯ ಮಹತ್ವವು ಅತ್ಯಂತವಿರುತ್ತದೆ. ವೇದ ಅಂದರೆ ಜಗತ್ತಿಗೆ ಸ್ಥಿತಿಗೆ, ಜಗತ್ತಿನ ಉನ್ನತ ಜೀವನಕ್ಕೆ, ಅಷ್ಟೇ ಅಲ್ಲ, ಜಗತ್ತಿನ ಉದ್ಧಾರಕ್ಕೆ ಅಂದರೆ ಪರಮಾತ್ಮನ ಸಾಕ್ಷಾತ್ಕಾರಕ್ಕೆ ತದಂಗಭೂತವಾಗಿರುವಂತಹ ಉತ್ಕೃಷ್ಟ ಜೀವನ ಸಾಧನಕ್ಕೆ ಮಾರ್ಗದರ್ಶನವಾಗಿರುವುದು… ಇದನ್ನು ಬೆಳಕಿಗೆ ತರುವಂತಹ ಒಂದು ಹೊಣೆಗಾರಿಕೆ ನಿಮ್ಮ ಮೇಲೆ ಹೆಚ್ಚಿದೆ. ಮಾರ್ಗವನ್ನು ತೋರಿಸಿ ನಡೆಸಿಕೊಂಡು ಹೋಗುವಂತಹ ಒಂದು ಕರ್ತವ್ಯ ಜನರದ್ದೇ ಆಗಿದೆ. ಹೀಗೆ, ನಾನು ಸ್ಥಾಪನೆ ಮಾಡುವ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಮುಂದೆ ನಡೆಸಿಕೊಂಡು ಹೋಗುವಂಥ ಒಂದು ಕರ್ತವ್ಯ ಮಾತ್ರ ನಿಮ್ಮಗಳದ್ದಾಗಿದೆ.

ತಾತ್ಪರ್ಯ : ನೀವು ಶ್ರಮಪಟ್ಟು, ಇದರ ಮಹತ್ವವನ್ನು ಅರಿತು ಇದನ್ನು ಆದಷ್ಟು ಮಟ್ಟಿಗೆ ಮುಂದೆ ತರುವ ಚಟುವಟಿಕೆಗಳನ್ನು ಮಾಡುವಂತದ್ದು, ಇದು ನಿಮ್ಮೆಲ್ಲರ ಕರ್ತವ್ಯ ರೂಪದಿಂದ ಇದೆ. ನೀವು ಸಜ್ಜನರು, ತಿಳಿದವರು, ವಿಚಾರವಂತರು, ವಿವೇಕಿಗಳು ಇದನ್ನು ತಿಳಿದುಕೊಂಡೆ ಇರುವಿರಷ್ಟೆ ! ಇದನ್ನು ಕಾರ್ಯದಲ್ಲಿ ತೋರಿಸುವಂತದ್ದೊಂದು ಈಗಿನ ಈ ಪರಿಸ್ಥಿತಿಯ ಪ್ರಕಾರ ಅತ್ಯಂತ ಅವಶ್ಯಕವಿದೆ. ಅದನ್ನು ನೀವು ಮಾಡುವಿರೆಂದು ನನ್ನ ನಂಬಿಕೆ”
(ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆ, 2013ರ ಆವೃತ್ತಿ, ಪುಟ ಸಂಖ್ಯೆ 802-803)

ಶ್ರೀ ಗುರುಕೃಪೆಯಿಂದ ಶ್ರೀ ಶ್ರೀಧರ ಸಾಂಗವೇದ ವಿದ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯವು ಶುಭಾರಂಭಗೊಂಡಿದೆ. ಈ ಕಟ್ಟಡಕ್ಕೆ ಅಂದಾಜು 80 ಲಕ್ಷ ರೂಪಾಯಿ ತಗುಲಬಹುದೆಂದು, ಸಾಮಾಗ್ರಿಗಳ ಈಗಿನ ಧಾರಣೆಗಳ ಮೇಲೆ ನಿಶ್ಚಯಿಸಲಾಗಿದೆ. ಈ ಕಟ್ಟಡವು ಇನ್ನು 6 ತಿಂಗಳೊಳಗಾಗಿ ಪೂರೈಸುವ ನಿರೀಕ್ಷೆಯಿದೆ. ಈ ಕಾಮಗಾರಿಯನ್ನು “ಮಾಸ್ಟರ್ ಪ್ಲ್ಯಾನರಿ ಪುತ್ತೂರು” ಇವರು ಮಾಡುತ್ತಿದ್ದಾರೆ. ಈ ಶ್ರೀ ಗುರುಸೇವಾ ಮಹತ್ಕಾರ್ಯಕ್ಕೆ ತಾವುಗಳು ತಮ್ಮಿಂದ ಆಗುವ ಎಲ್ಲಾ ವಿಧವಾದ ಸೇವಾ ಸಹಕಾರಗಳನ್ನು ನೀಡಬಹುದಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಶ್ರೀ ಶ್ರೀಧರಾಶ್ರಮ ಕಾರ್ಯಾಲಯದಲ್ಲಿ ಪಡೆಯಬಹುದು. ಈ ಕಾರ್ಯಕ್ಕೆ ಧನ ಸೇವೆಯನ್ನು ಮಾಡಲು ಆಸಕ್ತಿಯಿದ್ದವರು, ಈ ಕೆಳಕಂಡ ಖಾತೆಗೆ ಹಣವನ್ನು ಜಮಾ ಮಾಡಿ ಶ್ರೀ ಶ್ರೀಧರಾಶ್ರಮದ ಕಾರ್ಯಾಲಯಕ್ಕೆ ತಿಳಿಸಬೇಕಾಗಿ ವಿನಂತಿ.

ವಂದನೆಗಳೊಂದಿಗೆ

ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)
ಶ್ರೀ ಶ್ರೀಧರಾಶ್ರಮ-ಶ್ರೀಕ್ಷೇತ್ರ ವರದಪುರ
ಯಡಜಿಗಳೇಮನೆ ಅಂಚೆ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ದೂ : 08183 : 236166, 236011, 296583
shrishridharashrama@gmail.com
info@shrishridhara.org
Website : www.shrishridhara.org

Name Of the Account : SHRI SHRIDHARA SEVA MAHAMANDALA(R.)
A/c No : 64024853819
Branch Name : STATE BANK OF MYSORE, SAGAR
IFSC Code : SBMY0040136

By the grace and blessings of Shri Guruji, the construction work of Shri Shridhara Sangaveda Vidyalaya has begun. The cost of this building is more than 80 lakhs as per plan and estimation by Master Plannery Engineer Puttur. A copy of which is displayed for perusal of devotees. For this great pious cause, we whole heartedly appeal all devotees to liberally extend their helping hand to complete this building work in the stipulated period and we need not elaborate more in this aspect. The devotees are requested to credit their contribution to our A/c given here under.

Name Of the Account : SHRI SHRIDHARA SEVA
MAHAMANDALA(R.)
A/c No : 64024853819
Branch Name : STATE BANK OF MYSORE, SAGAR
IFSC Code : SBMY0040136

Shri Shridhara Seva Mahamandala (R.)
Shri Shridharashrama, Varadapura
E J Mane Post, Sagar Taluk, Shimoga 577401
Ph : 08183 - 236166, 236011, 295683
shrishridharashrama@gmail.com, info@shrishridhara.org
Website : www.shrishridhara.org

Phone: 08183-236166,
             08183-296583

EMail: info@shrishridhara.org

Please Mail us your QUERIES,
we will get back to you soon..
Name:
Your Address:
E-mail:
Phone:
Mobile:
Comments: